Sunday, 27 September 2015
ಬೀಸಿತು ಸುಖಸ್ಪರುಶವಾತಂ - ಭಾಗ ೩
Sunday, 13 September 2015
ಬಾಹುಬಲಿಯ ನೆನಪು...
ಅಷ್ಟರಲ್ಲಾಗಲೇ ಭರತನಿಗೂ ತನ್ನ ತಪ್ಪಿನ ಅರಿವಾಗಿರುತ್ತದೆ. ಅವನು ಬಾಹುಬಲಿಯನ್ನು ತಪಸ್ಸಿಗೆ ಹೊರಡಬೇಡವೆಂದು ಪ್ರಾರ್ಥಿಸುತ್ತಾನೆ. ಆದರೆ ಬಾಹುಬಲಿಯ ನಿರ್ಧಾರ ದೃಢವಾಗಿರುತ್ತದೆ. ಅವು ಭರತನಿಗೆ ಹೇಳುತ್ತಾನೆ :-
ತ್ಪಲವನವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಳ್ತೆ ಮಾಸದೇ"
Saturday, 12 September 2015
ಆಗಸವ ನೋಡುತ್ತ…
ಹೀಗೇ ಒಂದ್ಹತ್ತು ನಿಮಿಷಗಳಿಂದ ಆಕಾಶವನ್ನೇ ನೋಡುತ್ತ ಕುಳಿತಿದ್ದೆ. ತೆರೆಯ ಮೇಲಿನ ಚಿತ್ರಗಳಂತೆ ಮೋಡಗಳು ಒಂದರ ಹಿಂದೆ ಒಂದು ಸಾಗುತ್ತಿದ್ದವು. ಕೆಲವು ಅಪ್ಪಟ ಬಿಳಿಯವಾದರೆ ಕೆಲವು ಭಾಗಶಃ ಕಪ್ಪಿನ ಛಾಯೆಯವು…
ಆಗಸದ ಹಿನ್ನೆಲೆಯೂ ವರ್ಣರಂಜಿತವಾಗಿಯೇ ಇತ್ತು. ಸ್ವಲ್ಪ ಬಿಳಿ, ಸ್ವಲ್ಪ ನೀಲಿ, ಕಂಡೂ ಕಾಣದಂತೆ ತಿಳಿ ಹಳದಿಯ ಅಥವಾ ತಿಳಿ ಬಂಗಾರದ ಬಣ್ಣ. ಒಂದು ಕಡೆ ದಟ್ಟ ಕೆಂಪಿನ ಬಣ್ಣ.. ಅದರ ಆಚೀಚೆಗೆ ತಿಳಿ ಕೆಂಪು ಅಥವಾ ಗುಲಾಬಿ! ಅಂತೂ ಆ ವಿವಿಧ ವರ್ಣಗಳು ಹಿನ್ನೆಲೆಯಲ್ಲಿರಲು ಈ ಮೋಡಗಳ ಮೆರವಣಿಗೆ ಸಾಗಿತ್ತು.
ಇಲ್ಲಿ, ನನ್ನ ಮನಸೂ ಏನೇನೋ ಯೋಚಿಸುತ್ತಿತ್ತು. ಓಡುತ್ತಿರುವ ಈ ಮೋಡಗಳಂತೆಯೇ ನನ್ನ ಆಲೋಚನೆಗಳೂ ಕೂಡ ಮೂಡಿ ಮರೆಯಾಗುತ್ತ, ಕ್ಷಣಕ್ಷಣಕ್ಕೂ ಬೇರೆಬೇರೆಯಾಗಿ ತೋರಿದವು.
ಹಾಗೇ ಒಮ್ಮೆ ಆದಿಪುರಾಣದ ನೆನಪಾಯಿತು ನನಗೆ. ಅದರಲ್ಲೂ ಇಂಥದ್ದೇ ಒಂದು ಪ್ರಸಂಗ. ಜೈನ ಅರಸನೊಬ್ಬ ಆಗಸದಲ್ಲಿನ ಮೋಡಗಳನ್ನು ನೋಡುತ್ತಿರುವಾಗ ಅವನಿಗೆ ಗೋಪುರದ ರೂಪದಲ್ಲಿರುವ ಮೋಡವೊಂದು ಕಾಣಿಸುತ್ತದೆ. ಅದನ್ನು ಕಂಡ ಅವನ ಮನಸ್ಸು ಆನಂದದಿಂದ ನಲಿಯುತ್ತದೆ.
ಆಹಾ! ಈ ಸುಂದರ ಮೋಡದ ಚಿತ್ರವನ್ನಾದರೂ ರಚಿಸೋಣವೆಂದುಕೊಂಡು ಆತ ಚಿತ್ರ ಬಿಡಿಸುವ ಸಾಮಗ್ರಿಗಳನ್ನು ತರಲು ಆಳುಗಳಿಗೆ ಹೇಳುತ್ತಾನೆ. ಇನ್ನೇನು ಎಲ್ಲ ಸಾಮಗ್ರಿಗಳೂ ಸಿಕ್ಕು ಆತ ಆ ಮೋಡದ ಚಿತ್ರವನ್ನು ಬಿಡಿಸಲು ತೊಡಗಬೇಕು, ಆಗ ಅವನು ಆಗಸದ ಕಡೆಗೆ ನೋಡಿದರೆ ಅಲ್ಲಿ ಆ ಸುಂದರ ರೂಪದ ಮೋಡವೇ ಇಲ್ಲ!
ಅಷ್ಟರಲ್ಲಾಗಲೇ ಆ ಮೋಡದ ಹಿಂದಿನ ರೂಪವು ಹೋಗಿ ಅದು ಗುರುತು ಹಿಡಿಯಲೂ ಆಗದಂತಾಗಿರುತ್ತದೆ.
ಅಯ್ಯೊ, ಒಂದೆರಡು ಕ್ಷಣಗಳಲ್ಲೇ ಎಂತಹ ಬದಲಾವಣೆ. ಮನೋಹರವಾದ ಗೋಪುರವನ್ನು ಹೋಲುವ ಆ ಮೋಡದ ರೂಪ ಅದೆಷ್ಟು ಬೇಗ ಕರಗಿಹೋಯಿತು. ಎಷ್ಟು ಕ್ಷಣಿಕವದು! - ಅವನಿಗೆ ಈ ವಿಚಾರ ಬೋಧೆಯಾಗುತ್ತದೆ. ನರರ ಬಾಳೂ ಅಂತೆಯೇ ಅನಿತ್ಯವಾದದ್ದು ಎಂಬ ಸತ್ಯ ಅವನಿಗೆ ತೋರುತ್ತದೆ. ಮನಸಿನಲ್ಲಿ ವೈರಾಗ್ಯ ಬೇರೂರುತ್ತದೆ.
ತಕ್ಷಣವೇ ಅವನು ಲೌಕಿಕ ವಿಷಯಗಳ ಬಗ್ಗೆ ನಿರ್ಲಿಪ್ತನಾಗಲು ಬಯಸಿ, ತನ್ನ ಮಗುವಿಗೆ ರಾಜ್ಯದ ಪಟ್ಟ ಕಟ್ಟಿ ತಾನು ಜಿನದೀಕ್ಷೆಯನ್ನು ಪಡೆಯುತ್ತಾನೆ.
ಮಾಮೂಲಾಗಿ ಜೈನಪುರಾಣಗಳಲ್ಲಿ ಯಾರಾದರೂ ಅರಸನಲ್ಲಿ ವೈರಾಗ್ಯ ಮೂಡುವ ಪ್ರಸಂಗದ ವಿವರಣೆ - ಆತನಿಗೆ ತನ್ನ ಕೂದಲಿನಲ್ಲಿ ನೆರೆ ಕಂಡಾಗ ಅವನಿಗೆ ವೈರಾಗ್ಯವುದಿಸಿತು - ಎಂಬಂತಿರುತ್ತದೆ. ತೀರ ಇದೇ ಕಾರಣವು ಬಹುತೇಕ ಎಲ್ಲ ಕತೆಗಳಲ್ಲಿ ಬಂದಾಗ ಅದೊಂದು ರೀತಿಯ ಏಕತಾನತೆ ಎನಿಸುತ್ತದೆ. ಕತೆಯಲ್ಲಿ ಅಂಥ ಸ್ವಾರಸ್ಯವೂ ಇರೋಲ್ಲ.
ಅವುಗಳಿಗೆ ಹೋಲಿಸಿದರೆ ಈ ಮೋಡವನ್ನು ಕಂಡು ವೈರಾಗ್ಯವುದಿಸುವ ಪ್ರಸಂಗ ಸ್ವಲ್ಪ ಭಿನ್ನವಾಗಿಯೂ ಹೊಸದಾಗಿಯೂ ತೋರುತ್ತದೆ.
Wednesday, 9 September 2015
"ಉದ್ಭಟಕಾವ್ಯ"ವೆಂಬ "ಶೃಂಗಾರಸಾರ"
ಈ ಪ್ರವರದಲ್ಲಿ ಬರುವ ವಿವರದಿಂದ ಸೋಮರಾಜನು ಚಂದ್ರವಂಶಕ್ಕೆ ಸೇರಿದ ದೊರೆಯೆಂದು ತಿಳಿದುಬರುತ್ತದೆಯಾದರೂ, ಇವನು ಹಾಗೂ ಇವನ ಪೂರ್ವಿಕರು ಯಾವ ಪ್ರಾಂತವನ್ನು ಆಳುತ್ತಿದ್ದರೆಂದು ತಿಳಿಯುವುದಿಲ್ಲ. ಆ ಬಗ್ಗೆ ಸೋಮರಾಜನು ಹೆಚ್ಚಿಗೆ ಏನನ್ನೂ ಹೇಳಿಕೊಂಡಿಲ್ಲ. ಆದರೂ ಕೃತಿಯಲ್ಲಿ ಕುಂತಳದೇಶವನ್ನೂ, ಪಂಪಾಕ್ಷೇತ್ರದ ಸೌಂದರ್ಯ, ಮಹಿಮೆಯನ್ನೂ ಕುರಿತು ಮನದುಂಬಿ, ಅತಿ ಪ್ರೀತಿ-ಹೆಮ್ಮೆಯಿಂದ ವರ್ಣಿಸಿರುವುದನ್ನು ನೋಡಿದರೆ ಬಹುಶಃ ತುಂಗಾನದಿಯ ಹತ್ತಿರದ್ದೇ ಯಾವುದಾದರೂ ಪ್ರಾಂತವನ್ನು ಸೋಮದೇವನ ವಂಶದವರು ಆಳುತ್ತಿದ್ದಿರಬೇಕೆಂದು ಊಹಿಸಬಹುದಾಗಿದೆ. ("ಈ ವಂಶದ ಅರಸರು ಎಲ್ಲಿ ರಾಜ್ಯವಾಳುತ್ತಿದ್ದರೋ ತಿಳಿಯದು. ಆದರೆ, ಪಶ್ಚಿಮ ತೀರದಲ್ಲಿ ಆಳುತ್ತಿದ್ದ ವೀರಶೈವ ಮತಾವಲಂಬಿಗಳಾದ ಚೌಟರಾಜರಲ್ಲಿ ತಿರುಮಲರಾಯ, ಚಂದ್ರಶೇಖರ ಎಂಬ ಹೆಸರುಗಳು ದೊರೆಯುತ್ತದೆ" ಎಂದು ಕವಿಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ).
ಮೇರುಪರ್ವತದ ದಕ್ಷಿಣ ದಿಶೆಯಲ್ಲಿರುವ ಘೂರ್ಜರದೇಶದ ಭಲ್ಲಕೀನಗರದ ಅರಸು ಉದ್ಭಟದೇವ. ಒಂದು ದಿನ ಈತನನ್ನು ಕಾಣಲು ಋಷಿಕುಮಾರನೊಬ್ಬ ಬರುತ್ತಾನೆ. ಆತ ಉದ್ಭಟನನ್ನು - ತನ್ನ ಗುರುಗಳಾದ ದೇವಲ ಮಹರ್ಷಿಗಳು ನಡೆಸುತ್ತಿರುವ ಯಾಗಕ್ಕೆ ತೊಂದರೆ ಕೊಡುತ್ತಿರುವ ನಿಘರ್ಜನೆಂಬ ಅಸುರನನ್ನು ಸಂಹರಿಸಿ, ಯಾಗವನ್ನು ನಿರ್ವಿಘ್ನವಾಗಿ ನೆರವೇರುವಂತೆ ಮಾಡಲು - ಯಾಗದ ರಕ್ಷಣೆಗಾಗಿ - ಪಂಪಾಕ್ಷೇತ್ರಕ್ಕೆ ಬರಬೇಕೆಂದು ಬಿನ್ನವಿಸುತ್ತಾನೆ. ಅದಕ್ಕೆ ಸಮ್ಮತಿಸಿದ ಉದ್ಭಟನು ಪಂಪಾಕ್ಷೇತ್ರಕ್ಕೆ ಬಂದು ನಿಘರ್ಜನನ್ನು ಕೊಂದು, ದೇವಲ ಮಹರ್ಷಿಗಳು ಸಂಕಲ್ಪಿಸಿದ ಯಜ್ಞ ನಿರ್ವಿಘ್ನವಾಗಿ ನೆರವೇರುವಂತೆ ಮಾಡುತ್ತಾನೆ.
Sunday, 9 August 2015
ಮತ್ತೆ ಅದೇ ಪ್ರಶ್ನೆ!
ಮುಂದೆ ಏನು? ಮತ್ತೆ ಏನು? -
ಮತ್ತೆ ಅದೇ ಪ್ರಶ್ನೆಯು;
ಕೇಳುವ ದನಿ ಮಾತ್ರ ಬೇರೆ,
ಕಾಡುತಿಹುದು ನಿತ್ಯವು.
ಮುಂದುಗಾಣದಂತೆ ಕಣ್ಣ
ಕತ್ತಲೆಯದು ಕವಿದಿದೆ;
ವಿಧಿಯ ಆಟದಲ್ಲಿ ಸಿಲುಕಿ
ಜೀವವಿಂದು ನಲುಗಿದೆ.
………
………
ಯಾವ ಮರುಳೊ ಯಾವ ಭ್ರಮೆಯೊ
ಮನವನಿಂದು ಮುಸುಕಿದೆ;
ಕಣ್ಣೆದುರಿನ ಸತ್ಯವನ್ನು
ತಾನು ಕಾಣದಾಗಿದೆ.
ಕಂಗಳೆರಡು ನೋಟ ಒಂದು -
ಎಂಬ ಸತ್ಯ ಮರೆತಿದೆ
ಯಾವ ಕಣ್ಣಿಗಾವ ಕನಸೊ
ಎಂದು ತಿಳಿಯದಾಗಿದೆ
ಎದೆಯ ತುಂಬ ತುಂಬಿ ನಿಂತ
ಭಯವು ಮತ್ತೆ ಕಾಡಿದೆ;
ಮುಂದುವರೆವ ದಾರಿ ಯಾವ -
ದಿಕ್ಕಿಗೆಂದು ಕೇಳಿದೆ.
ಬಗೆಯನರಿಯೆ ಬೆಳಕನರಿಯೆ
ಎಂದು ಮನವು ತೊಳಲಿದೆ;
ದಾರಿ ತೋರು ಗುರುವೆ ಎಂದು
ದೇವನನ್ನು ಬೇಡಿದೆ.
………
………
ಹೆದರಬೇಡ ಮನವೆ, ಕೇಳು -
ಮುಗಿಯುವುದೀ ರಾತ್ರಿಯು;
ತಮದ ಹಿಂದೆ ಬೆಳಕು ಬಹುದು,
ಇಂದಿಗಿಹುದು ನಾಳೆಯು.
Thursday, 30 July 2015
ವೀರಗಲ್ಲು - ದೊಡ್ಡಗದ್ದವಳ್ಳಿ
"ಸ್ವಸ್ತಿ ಶ್ರೀಮಾನುಮಹಾಮಂಡಳೇಶ್ವರ ಬಿಟ್ಟಿದೇವ……………
[ಡಂ] ಚಿಕ್ಕಬಿಟ್ಟಿದೇವ[ನ] ಆಳ್ದೋನ ರಾಜ್ಯಂ ಬೊಪ್ಪದೇವನ ಕಾಳ
ಗದಲು ಕುದುರೆಗಾಳಗ ಕಾದಿ…………… ಜಯರಾಹು
ತ್ತ ಸುರಲೋಕಪ್ರಾಪ್ತ[ನಾದಂ ಪರಾ]ಭವ ಸಂವಚರ"
ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿರುವ ವೀರಗಲ್ಲು ಶಾಸನ (ಕಾಲ: ಸು ೧೧೨೬-೨೭)
"This damaged hero-stone record is set up in memory of a cavalier (name lost) who died in a battle against (?) Boppadeva during the reign of Chikka Bittideva. It refers to 'mahaamandaleshwara' Bittideva and to the cyclic year Paraabhava. The record is in c. 12th century characters and the date may probably be equated with 1126-27 AD., in the reign of Vishnuvardhana."
~Epigraphia Carnatica
ಕುದುರೆಗಾಳಗದ ದೃಶ್ಯವನ್ನೂ, ಕಾಳಗದಲ್ಲಿ ಮಡಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ದೃಶ್ಯವನ್ನೂ ಇಲ್ಲಿ ಕಾಣಬಹುದು.
Ref: Epigraphia Carnatica
అలర చంచలమైన ఆత్మలందుండ నీయలవాటు సేసెనీ వుయ్యాల
అలరచంచలమైన ఆత్మలందుండ నీయలవాటు సేసెనీవుయ్యాల
పలుమారునుచ్ఛ్వాస పవనమందుండ నీ భావంబు దెలిపెనీ వుయ్యాల
ఉదయాస్త శైలంబులొనర కంభములైన ఉడుమండలము మోచెనుయ్యాల
అదన ఆకాశపదంబడ్డదూలంబైన అఖిలంబు నిండెనీ వుయ్యాల
పదిలముగ వేదములు బంగారు చేరులై పట్టి వెరపై తోచె వుయ్యాల
వదలకిటు ధర్మదేవత పీఠమై మిగుల వర్ణింపనరుదాయె వుయ్యాల
మేలుకట్లై మీకు మేఘమండలమెల్ల మెరుగునకు మెరుగాయె వుయ్యాల
నీలశైలమువంటి నీ మేనికాంతికి నిజమైన తొడవాయె వుయ్యాల
పాలిండ్లు కదలగా పైయెదలు రాపాడ భామినులు వడినూచు వుయ్యాల
వోలి బ్రహ్మాండములు వొరగువోయని భీతి నొయ్యనొయ్యన వూచిరి వుయ్యాల
కమలకును భూసతికి కదలు-కదలుకు నిన్ను కౌగిలింపగజేసెనుయ్యాల
అమరాంగనలకు నీ హావభావ విలాసమందంద జూపెనీ వుయ్యాల
కమలాసనాదులకు కన్నులకు పండుగై గణుతింపనరుదాయె వుయ్యాల
కమనీయ మూర్తి వేంకటశైలపతి నీకు కడువేడుకై వుండె వుయ్యాల
రచన : తాళ్లపాక శ్రీ అన్నమాచార్యులు